ಸೀಲಿಯಾಳಿಗೆ 
ಮಧುವನೀಂಟೆಲೆ  ಸಖಿಯೆ  (ನನಗಾಗಿ) ನಯನಗಳಲೇ,
      ಮುದದೆ ನಾ ಸ್ಪರ್ಧಿಸುವೆ ನನ್ನ ಕ್ಷಿಗಳಲೇ ;
ಮತ್ತೆ ನಿನ್ನಧರ ಮಧುವನು ನೀ ನೀಡಲೆನಗೆ
     ಅದನುಳಿದು ಮದಿರೆಯನು ನಾ ನೋಡೆನೆಲಗೆ;
ಹೃದಯದಲುದಿಸಿದೀ(ಈ) ದಾಹವೆಲೆ ಚಲುವೆ,
      ಬಯಸುತಿದೆ ತಾ ಸ್ವರ್ಗಸೀಮೆಯ ಮಧುವ ಸಖಿಯೇ,
ಸವಿದಿರಲಿ ಸೋಮವನು (ಅಮೃತ) ಈ ಮುನ್ನ ರನ್ನೆ ,
      ಸೇವಿಸೆನದನು  ನಿನ್ನುಳಿದು ನಾನಿನ್ನು ಚನ್ನೆ .

ಕಳುಹಿದೆನು ರೋಜ ಗುಚ್ಛವನೊಂದ ನಾ ನಿನ್ನ ಬಳಿಗೆ,
     ತಿಳಿದಿರುವೆ ದೋಷವನು ಅಲ್ಲವೆಂದದು ತಕ್ಕ ಸನ್ಮಾನ ನಿನಗೆ
ಎನ್ನೊಲವು ನಿನ್ನ ಬಳಿ ಬಾಡದಿರಲೆಂಬಾಸೆ ಯಿಂದ ಸದಯೆ,
      ಕಳುಹಿದೆನು ಎನ್ನ ಪ್ರೇಮದ ಗುಚ್ಛ 
ಬೆಳೆಯಲೆಂದಲ್ಲಿ ಸಖಿಯೆ, ಆದರದಿ ಅದನೊಮ್ಮೆ ನೀನಾಘ್ರಾಣಿಸಿ 
      ಕಳುಹಿರಲೆನಗೆ ಮುಗುದೆಅಂದಿನಿಂದದು ಬೆಳೆಯುವುದು 
ಬೀರುವುದು ಗಂಧವನೆನ್ನಹೃದಯೇ ಆ ಪರಿಮಳವು ಅಲ್ಲವದರದು ನುಡಿವೆ 
     ನೆನ್ನಾಣೆ ಸದಯೇ, ಸತ್ಯವಿದು ; ಅಂದಿನಿಂದದು ನಿಜದೆ 
            ನಿನ್ನದೇ ಪ್ರಾಣ ಪ್ರಿಯಳೇ!
(Golden Treasury 1874 Edition, poem 140(xc) pg 75)(Edited by FRANCIS TURNER PALGRAVE)೧೭ ನೇ ಶತಮಾನದ ಕವಿ ಬಿ..ಜಾನ್ಸನ್ ತನ್ನ ಪ್ರಿಯತಮೆ ಸೀಲಿಯಾಳಿಗೆ ಬರೆದ ಕವನ;  ಭಾವಾನುವಾದ; ಕಾಪಿರೈಟ್ ಮುಕ್ತ)
-ಟಿಪ್ಪಣಿ: ಅದನುಳಿದು ; ಅದನು + ಉಳಿದು (ಬಿಟ್ಟು)

 ಮೂಲ 

TO   CELIA
Drink to me only with thine eyes,
        And I will pledge with mine;
Or leave a kiss but in the cup
        And I ‘ll not look for wine.
The thirst that from the soul doth rise
        Doth ask a drink divine;
But might I of Jove’s necter sup,
        I would not change for thine.

I sent thee late a rosy wreath,
      Not so much honouring thee
As giving it a hope that there
      It could not wither’d be ;
But thou thereon didst only breathe
      And sent’st it back to me;
Since when it grows, and smells; I sware,
      Not of itself but thee!                                 
                              B.  Jonson
                               (A 17th c. poet )
[Golden Treasury 1874 Edition, poem 140(xc) pg 75); (Edited by FRANCIS TURNER  PALGRAVE)
]
Text is available under the Creative Commons Attribution-ShareAlike License;
(ಮೂಲ:-To Celia)))

ನೋಡಿ
ಇಂಗ್ಲಿಷ್ ಸಾಹಿತ್ಯ
ಒಂದು ಬಯಕೆ
ಪ್ರಿಯತಮೆಗೆ
ಪ್ರಿಯತಮೆ ಆಂಥಿಯಾಳಿಗೆ
 ನ್ಯೂಮನನ `ಲೀಡ್, ಕೈಂಡ್ಲಿ ಲೈಟ್: ಕರುಣಾಳು ಬಾ ಬೆಳಕೆ
 Sally in Our Alley: ಬಾಲ್ಯ ಪ್ರೇಮ - (12 ಪ್ರಾಯದ ಬಾಲಿಶ ಪ್ರೇಮ)
 THE TRUE BEAUTY;-ಥಾಮಸ್ ಕೇರ್ವ್(1594-1640)- ನೈಜ ಸೌಂದರ್ಯ

ಪರಿವಿಡಿ

ಉಲ್ಲೇಖ
Category: ಭಾವಗೀತೆಗಳುವರ್ಗ: ಕನ್ನಡ ಸಾಹಿತ್ಯವರ್ಗ: ಇಂಗ್ಲಿಷ್ ಸಾಹಿತ್ಯ